ಮೌನ ಮಂಟಪ: ಸಾವಿನ ನಂತರದ ಶಾಂತಿಧಾಮ
ಮನುಷ್ಯನ ಅಸ್ತಿತ್ವದಲ್ಲಿ ಎರಡು ವಿಧಗಳಿವೆ. ಒಂದು ಭೌತಿಕ ದೇಹ ಹೊಂದಿರುವ ಅಸ್ತಿತ್ವ, ಮತ್ತೊಂದು ಭೌತಿಕ ದೇಹವಿಲ್ಲದ ಅಸ್ತಿತ್ವ.
ನಮ್ಮ ಗುರುತಿಸುವಿಕೆ ಭೌತಿಕ ದೇಹವಿರುವ ಮನುಷ್ಯರಿಗೆ ಮಾತ್ರ ಸೀಮಿತವಾಗಿದೆ. ದೇಹವಿಲ್ಲದವರನ್ನು ನಾವು ನೋಡಲು ಅಥವಾ ಗುರುತಿಸಲು ಸಾಧ್ಯವಿಲ್ಲ. ಆದರೆ ಭೌತಿಕ ದೇಹವಿಲ್ಲದಿದ್ದರೂ ಅವರು ಆತ್ಮನ ರೂಪದಲ್ಲಿ ಈ ಜಗತ್ತಿನಲ್ಲಿ ಇರುತ್ತಾರೆ. ಅವರಲ್ಲಿ ಹಲವರು ನಮ್ಮ ಸ್ವಂತ ಪೂರ್ವಜರು ಮತ್ತು ಹಿರಿಯರು. ಅವರ ಸ್ಥಿತಿಯನ್ನು ನಾವು ಅರ್ಥಮಾಡಿಕೊಳ್ಳದ ಕಾರಣ, ಅವರ ಅಸ್ತಿತ್ವವನ್ನೇ ನಿರಾಕರಿಸುತ್ತೇವೆ. ಕೆಲವೊಮ್ಮೆ ಅವರನ್ನು ನಕಾರಾತ್ಮಕ ಆತ್ಮಗಳೆಂದು ಪ್ರಯತ್ನಿಸುತ್ತೇವೆ.
ಈ ಆತ್ಮಗಳು ಭೌತಿಕ ಲೋಕದಲ್ಲಿ ಉಳಿಯುವುದಕ್ಕೆ ಕಾರಣ, ಅವುಗಳು ತಮ್ಮ ಭೌತಿಕ ಅಸ್ತಿತ್ವದೊಂದಿಗೆ ಹೊಂದಿರುವ ಭಾಂಧವ್ಯಗಳು ಮತ್ತು ಪೂರೈಸದ ಆಸೆಗಳನ್ನು ತುಂಬಿಕೊಂಡು ಹೋಗಿರುತ್ತಾರೆ. ಹೀಗಾಗಿ, ದೇಹ ಸತ್ತಾಗ ಆತ್ಮವು ಭೌತಿಕ ಲೋಕದಲ್ಲಿ ಉಳಿಯುತ್ತದೆ. ಅವರನ್ನು ಅಲೆದಾಡುವ ಆತ್ಮಗಳೆಂದು ಕರೆಯಲಾಗುತ್ತದೆ. ಅವರು ತಮ್ಮ ಕದಡಿರುವ ಮನಸ್ಸನ್ನು ಶಾಂತಗೊಳಿಸಲು ಶಾಂತಿಯನ್ನು ಹುಡುಕುತ್ತಿರುತ್ತಾರೆ. ಅವರು ಈ ಸ್ಥಿತಿಯಲ್ಲಿ ಸುಖ ಅಥವಾ ಸಂಪತ್ತನ್ನು ಹುಡುಕುತ್ತಿಲ್ಲ; ಅವರು ಕೇವಲ ಆಂತರಿಕ ಶಾಂತಿಯನ್ನು ಮಾತ್ರ ಹುಡುಕುತ್ತಿದ್ದಾರೆ. ಜ್ಞ್ನಾನೋದಯಗೊಂಡ ಆತ್ಮಗಳಿಗೆ ಇದು ಬೇಕಾಗಿಲ್ಲ,ಏಕೆಂದರೆ ಅವರು ಶಾಂತಿಯಿಂದ ದೇಹವನ್ನು ಬಿಟ್ಟಿರುತ್ತಾರೆ ಮತ್ತು ಮನಸ್ಸಿನಲ್ಲಿ ಭಾಂಧವ್ಯಗಳನ್ನು ಸೇರಿಸಿಕೊಂಡು ಹೋಗಿರುವುದಿಲ್ಲ.
ಗುರುಗಳ ಕರುಣೆಯು ಜೀವಂತ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಅವರು ಈ ಅಲೆದಾಡುವ ಆತ್ಮಗಳಿಗೆ ಶಾಂತಿಯಿಂದ ಉಳಿಯಲು ಶಾಶ್ವತ ಮತ್ತು ಪವಿತ್ರ ಸ್ಥಳವನ್ನು ಒದಗಿಸುವ ಮೂಲಕ ಸಹಾಯ ಮಾಡಲು ಬಯಸುತ್ತಾರೆ . ಈ ಉದಾತ್ತ ಉದ್ದೇಶಕ್ಕಾಗಿ , ಮೌನ ಮಂಟಪವನ್ನು ಆಯ್ಕೆ ಮಾಡಲಾಗಿದೆ.
ಅಂತಹ ಆತ್ಮಗಳಿಗೆ ಅತ್ಯಂತ ಮುಖ್ಯವಾದ ಅಗತ್ಯವೆಂದರೆ ನಿರಂತರ ಮೌನ. ಅವರಿಗೆ ಆಚರಣೆಗಳು, ಶಬ್ದಗಳು, ಅಥವಾ ಚಟುವಟಿಕೆಗಳು ಅಗತ್ಯವಿಲ್ಲ. ಅವರ ದುಃಖವನ್ನು ಕರಗಿಸಲು ಅವರಿಗೆ ಗಾಢವಾದ ಮತ್ತು ಶಾಶ್ವತ ಮೌನ ಬೇಕು. ಮೌನೀಕರಣದ ಅಭ್ಯಾಸವು ಅವರಿಗೆ ಈ ಶಾಂತಿಯನ್ನು ನೀಡುವ ಅತ್ಯುತ್ತಮ ಮಾರ್ಗವಾಗಿದೆ.
ಚಿವಾಲಿಟಿ ಪದ್ಧತಿಯ ಅಭ್ಯಾಸಿಗಳು ಮೌನೀಕರಣದಲ್ಲಿ ಎಲ್ಲರೂ ಒಟ್ಟುಗೂಡಿ ಗುರುಗಳ ಊರ್ಜೆಯ ಸಹಾಯದಿಂದ ಅವರು ಸಕಾರಾತ್ಮಕ ಮೌನದ ಶಕ್ತಿಯ ಪ್ರಭಾ ವಲಯವನ್ನು ಸೃಷ್ಟಿಸುತ್ತಾರೆ . ಪ್ರತಿ ಭಾನುವಾರ , ಈ ಊರ್ಜೆಯು ಮೌನ ಮಂಟಪದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ. ಇದು ಅಲ್ಲಿ ವಾಸಿಸುವ ಪರಲೋಕದ ಆತ್ಮಗಳಿಗೆ ಬಹಳವಾಗಿ ಸಹಾಯವಾಗುತ್ತದೆ. ನಿಧಾನವಾಗಿ ಮನಸ್ಸು ನಿರಾಳವಾಗಿ ,ದುಃಖದಿಂದ ಮುಕ್ತಿ, ಮತ್ತು ಶಾಂತಿಯನ್ನು ಅನುಭವಿಸಲು ಪ್ರಾರಂಭವಾಗುತ್ತದೆ.
ಜ್ಞಾನೋದಯಗೊಂಡ ಆತ್ಮಗಳನ್ನು ಹೊರತುಪಡಿಸಿ , ಪ್ರತಿಯೊಂದು ಆತ್ಮಕ್ಕೂ ಭೌತಿಕ ಲೋಕವನ್ನು ಬಿಟ್ಟ ನಂತರ ಮೌನ ಮಂಟಪದಂತಹ ಸ್ಥಳ ಬೇಕು. ಇದು ಆತ್ಮಕ್ಕೆ ವಿಶ್ರಾಂತಿ ಮತ್ತು ಶುದ್ಧೀಕರಣದ ಸ್ಥಳವಾಗುತ್ತದೆ. ಮೌನ ಮಂಟಪವು ನಿರಂತರವಾಗಿ ಮೌನದಲ್ಲಿ ಉಳಿಯುವುದರಿಂದ, ಈ ಆತ್ಮಗಳು ಕ್ರಮೇಣ ನಕಾರಾತ್ಮಕತೆ ಮತ್ತು ದುಃಖದಿಂದ ತಮ್ಮನ್ನು ಮುಕ್ತಗೊಳಿಸಿಕೊಳ್ಳಬಹುದು ಮತ್ತು ನಿಧಾನವಾಗಿ ಮೋಕ್ಷದ ಕಡೆಗೆ ಸಾಗಬಹುದು.
ಆದರೆ , ಸ್ಪಷ್ಟವಾಗಿ ಅರ್ಥ ಮಾಡಿ ಕೊಳ್ಳಬೇಕಾದ ಒಂದು ಮುಖ್ಯ ಸತ್ಯವಿದೆ .ಒಬ್ಬರು ಜೀವಂತವಾಗಿರುವಾಗಲೇ ಚಿವಾಲಿಟಿ ಪದ್ದತಿಯ ಮೌನೀಕರಣದ ಅಭ್ಯಾಸವು ಹೆಚ್ಚು ಅಮೂಲ್ಯವಾಗಿದೆ. ಭೌತಿಕ ಜೀವನದಲ್ಲಿ ಮೋಕ್ಷವನ್ನು ಸಾಧಿಸುವುದು ಹೆಚ್ಚು ಸುಲಭ. ಒಮ್ಮೆ ವ್ಯಕ್ತಿಯು ಸತ್ತ ನಂತರ, ಆತ್ಮವು ಮೌನ ಮಂಟಪವನ್ನು ಪ್ರವೇಶಿಸಬಹುದೆಂಬುದಕ್ಕೆ ಯಾವುದೇ ಖಾತರಿ ಇಲ್ಲ, ನಿರ್ಬಂಧಗಳು ಇರಬಹುದು.
ಒಂದು ಆತ್ಮವು ಭಾರಿ ದುಃಖ, ಬಲವಾದ ಬಂಧವ್ಯಗಳು, ಮತ್ತು ತೀವ್ರವಾದ ನಕಾರಾತ್ಮಕತೆಯೊಂದಿಗೆ ದೇಹವನ್ನು ಬಿಟ್ಟರೆ , ಚಿವಂಗೆ ಶರಣಾಗದೆ ಮೌನ ಮಂಟಪವನ್ನು ಪ್ರವೇಶಿಸುವುದು ಸಾಧ್ಯವಿಲ್ಲ. ಮರಣದ ನಂತರ, ಮೋಕ್ಷವು ನೂರಾರು ವರ್ಷಗಳನ್ನು ತೆಗೆದುಕೊಳ್ಳಬಹುದು. ಆದ್ದರಿಂದ, ಈ ಲೋಕವನ್ನು ಬಿಡುವ ಮೊದಲು ತನ್ನ ನಕಾರಾತ್ಮಕತೆಯನ್ನು ಖಾಲಿ ಮಾಡುವುದು ಬುದ್ಧಿವಂತಿಕೆಯಾಗಿದೆ.
ಪ್ರಸ್ತುತ, ಗುರುಗಳ ಭೌತಿಕ ಉಪಸ್ಥಿತಿಯು ಎಲ್ಲರಿಗೂ ಲಭ್ಯವಿದೆ. ಚಿವಂನ ಊರ್ಜೆಯನ್ನು ಪಡೆಯಲು ಅಭ್ಯಾಸಿಯ ಕಡೆಯಿಂದ ಯಾವುದೇ ಹೆಚ್ಚುವರಿ ಪ್ರಯತ್ನದ ಅಗತ್ಯವಿಲ್ಲ. ಗುರುಗಳ ಭೌತಿಕ ರೂಪವನ್ನು ಕೇವಲ ನೆನಪಿಸಿಕೊಳ್ಳುವುದರಿಂದ, ಊರ್ಜೆಯು ಮುಕ್ತವಾಗಿ ಮತ್ತು ತಕ್ಷಣವೇ ಪ್ರತಿಯೊಬ್ಬ ಅಭ್ಯಾಸಿಗೆ ಪ್ರವಹಿಸುತ್ತದೆ. ಅಭ್ಯಾಸಿಯ ಇಚ್ಛೆಯಿಂದ ಮಾತ್ರ ದಿನದ ಪ್ರತಿಯೊಂದು ಕ್ಷಣದಲ್ಲಿ ಮನಸ್ಸಿನ ಶುದ್ಧೀಕರಣವು ಸಂಭವಿಸಬಹುದು. ಗುರುಗಳು ಮತ್ತು ಅಭ್ಯಾಸಿ ಇಬ್ಬರ ಭೌತಿಕ ದೇಹದ ಮರಣದ ಮೊದಲು ಈ ಅಮೂಲ್ಯವಾದ ಸಂಪರ್ಕವನ್ನು ಶಾಶ್ವತವಾಗಿಸಿಕೊಳ್ಳಬೇಕು. ಮರಣದ ನಂತರ, ಗುರುಗಳೊಂದಿಗೆ ಸಂಪರ್ಕ ಸಾಧಿಸುವುದು ಅತ್ಯಂತ ಕಷ್ಟಕರವಾಗುತ್ತದೆ.
ಆದ್ದರಿಂದ, ಈ ಭೌತಿಕ ಜಗತ್ತಿನಲ್ಲಿ ಜೀವಿಸುತ್ತಿರುವಾಗಲೇ, ಮೌನೀಕರಣದ ಅಭ್ಯಾಸ ಮಾಡುವುದು, ನಕಾರಾತ್ಮಕತೆಯನ್ನು ಕರಗಿಸುವುದು, ಮತ್ತು ಮೋಕ್ಷದ ಕಡೆಗೆ ಸಾಗುವುದು ಬಹಳ ಅವಶ್ಯಕವಾಗಿದೆ. ಮೌನವು ಯಾರನ್ನೂ ನಿರಾಕರಿಸುವುದಿಲ್ಲ. ಮೌನವನ್ನು ಸಂಪೂರ್ಣವಾಗಿ ಬಳಸುವ ಅವಕಾಶವು ನಾವು ಜೀವಂತವಾಗಿರುವಾಗಲೇ ಹೆಚ್ಚು ಸೂಕ್ತವಾಗಿದೆ.
-----------------------------
ಮನೋನಾಶ ಮತ್ತು ಚಿವಂನ ಸಾಕ್ಷಾತ್ಕಾರ
ಚಿವಾಲಿಟಿ ಪದ್ಧತಿಯ ಅಭ್ಯಾಸವು ಹೊಸದನ್ನು ಪಡೆಯಲು ಅಲ್ಲ. ಮನಸ್ಸಿನಲ್ಲಿ ಎಂದಿಗೂ ಇರಬಾರದುದನ್ನು ಕಳೆದುಕೊಳ್ಳುವುದಾಗಿದೆ. ಕಳೆದುಕೊಳ್ಳಬೇಕಾದುದು ಹೊರಗಿನ ವಿಷಯವಲ್ಲ, ನಮ್ಮೊಳಗೆ ಇರುವುದು.
ಭಯ, ಆತಂಕ, ಚಿಂತೆಗಳು, ಭಾವನೆಗಳು, ಬಂಧನಗಳು, ನಿರೀಕ್ಷೆಗಳು, ಸಂತೋಷಗಳು, ಮತ್ತು ನೋವುಗಳು ಮನುಷ್ಯನ ಮನಸ್ಸಿನ ಆಂತರಿಕ ಶತ್ರುಗಳಾಗಿವೆ. ಈ ಎಲ್ಲಾ ವಿಷಯಗಳು ಮನಸ್ಸಿನಲ್ಲಿ ಇರುವವರೆಗೆ, ದುಃಖವು ಒಂದಲ್ಲ ಒಂದು ರೂಪದಲ್ಲಿ ಮುಂದುವರಿಯುತ್ತದೆ.
ಈ ಕಾರಣಕ್ಕಾಗಿ, ಚಿವಾಲಿಟಿ ಪದ್ಧತಿಯು ಸಮಸ್ಯೆಯನ್ನು ಅದರ ಮೂಲದಲ್ಲಿಯೇ ಪರಿಹರಿಸುತ್ತದೆ. ಆಲೋಚನೆಗಳನ್ನು ನಿರ್ವಹಿಸುವುದರ ಮೂಲಕ ಅಥವಾ ಭಾವನೆಗಳನ್ನು ನಿಯಂತ್ರಿಸುವುದರ ಮೂಲಕ ಅಲ್ಲ, ಆದರೆ ಅವು ಹುಟ್ಟುವ ಮೂಲವನ್ನೇ ನಾಶ ಮಾಡುತ್ತದೆ.
ನಕಾರಾತ್ಮಕತೆ ಮನಸ್ಸಿಗಿಂತ ಬೇರೆಯಲ್ಲ
ನಕಾರಾತ್ಮಕ ಗುಣಗಳು ಸ್ವತಂತ್ರ ವಸ್ತುಗಳಲ್ಲ. ಅವು ಮನಸ್ಸಿನ ಮೂಲಕ ಭಾವನೆಯ ರೂಪದಲ್ಲಿ ವ್ಯಕ್ತವಾಗುತ್ತವೆ. ಉದಾಹರಣೆಗೆ, ಭಯವು ಮನಸ್ಸಿನಲ್ಲಿ ಭವಿಷ್ಯವನ್ನು ಯೋಜಿಸುವುದು. ಆತಂಕವು ಮನಸ್ಸಿನಲ್ಲಿ ಅನಿಶ್ಥಿತತೆಗೆ ಬಂಧಿಸಿಕೊಳ್ಳುವುದು. ಚಿಂತೆಯು ಮನಸ್ಸಿನ ಕಲ್ಪಿತ ಸಮಸ್ಯೆಗಳನ್ನು ಪುನರಾವರ್ತಿಸುವುದು. ಭಾವನೆಗಳು ಮತ್ತು ಭಾವುಕತೆಗಳು ಮನಸ್ಸಿನಲ್ಲಿ ನೆನಪು ಮತ್ತು ನಿರೀಕ್ಷೆಗೆ ಪ್ರತಿಕ್ರಯಿಸುವುದು.
ಮನಸ್ಸು ಕಾರ್ಯ ನಿರ್ವಹಿಸುತ್ತಿರುವವರೆಗೆ, ಸಕಾರಾತ್ಮಕತೆ ಮತ್ತು ನಕಾರಾತ್ಮಕತೆ ಎರಡೂ ಅಸ್ತಿತ್ವದಲ್ಲಿರುತ್ತವೆ. ಕೇವಲ ನಕಾರಾತ್ಮಕತೆಯನ್ನು ತೆಗೆದು ಹಾಕುವುದರಿಂದ ಮನುಷ್ಯನ ಜನ್ಮದ ಉದ್ದೇಶ ಪೂರ್ಣವಾಗುವುದಿಲ್ಲ. ಅಂತಿಮವಾಗಿ ಮನಸ್ಸು ಸಂಪೂರ್ಣ ನಾಶವಾಗಬೇಕಾಗುತ್ತದೆ. ಇದೇ ಚಿವಾಲಿಟಿ ಪದ್ಧತಿಯ ಮುಖ್ಯ ಗುರಿಯಾಗಿದೆ.
ಚಿವ ಗುರುಗಳ ಪಾತ್ರ ಮತ್ತು ಚಿವಂನ ಊರ್ಜೆ
ಈ ಹಂತದಲ್ಲಿ, ಒಂದು ಪ್ರಶ್ನೆ ಸ್ವಾಭಾವಿಕವಾಗಿ ಉದ್ಭವಿಸುತ್ತದೆ: ಮನಸ್ಸು ತನ್ನನ್ನು ತಾನೇ ಕೊನೆಗಾಣಿಸಲು ಸಾಧ್ಯವಾಗದಿದ್ದರೆ, ನಾಶವು ಹೇಗೆ ಸಂಭವಿಸುತ್ತದೆ?
ಚಿವಾಲಿಟಿ ಪದ್ಧತಿಯಲ್ಲಿ ಸ್ವ-ಪ್ರಯತ್ನ-ಆಧಾರಿತ ಅಭ್ಯಾಸವಲ್ಲ ಏಕೆಂದರೆ ಮನುಷ್ಯನ ಮನಸ್ಸು ತನ್ನನ್ನು ತಾನೇ ನಾಶಪಡಿಸಲು ಸಾಧ್ಯವಿಲ್ಲ; ಮನಸ್ಸನ್ನು ಕೊನೆಗಾಣಿಸಲು ಮನಸ್ಸಿನ ಯಾವುದೇ ಪ್ರಯತ್ನವು ಮತ್ತೊಂದು ಮಾನಸಿಕ ಚಟುವಟಿಕೆಯಷ್ಟೇ.
ಅದಕ್ಕಾಗಿಯೇ ಚಿವಾಲಿಟಿ ಪದ್ಧತಿಯಲ್ಲಿ ಚಿವ ಗುರುಗಳು, ಸ್ಮರಣೆ ಮತ್ತು ಮೌನೀಕರಣದ ಮೇಲೆ ಕೇಂದ್ರೀಕೃತವಾಗಿದೆ. ಚಿವ ಗುರುಗಳ ನಿರಂತರ ಸ್ಮರಣೆ ಮತ್ತು ಪ್ರಾಮಾಣಿಕ ಮೌನೀಕರಣದ ಅಭ್ಯಾಸದ ಮೂಲಕ, ಸಾಧಕನು ಚಿವಂನ ಊರ್ಜೆಯನ್ನು ಸ್ವೀಕರಿಸಬೇಕಾಗುತ್ತದೆ. ಇದು ಮನುಷ್ಯನ ಮನಸ್ಸಿಗೆ ಸೇರಿದ ಊರ್ಜೆಯಲ್ಲ; ಇದು ಗುರುಗಳ ಮೂಲಕ ಮಾತ್ರ ಪಡೆಯುವಂತಹದು.
ಈ ಊರ್ಜೆಯು ಮನಸ್ಸನ್ನು ಕ್ರಮೇಣ ಖಾಲಿ ಮಾಡುತ್ತಾ ಹೋದಂತೆ ಸಕಾರಾತ್ಮಕತೆಯ ಕಡೆಗೆ ರೂಪಾಂತರವಾಗಿ ಕೊನೆಯಲ್ಲಿ ಮನೋನಾಶವಾಗುವುದು.
ಮೌನೀಕರಣ ಮಾತಿನ ಮೌನವಲ್ಲ
ಮೌನೀಕರಣವು ಮನಸ್ಸಿನ ಮೌನ, ಮಾತಿನ ಮೌನವಲ್ಲ. ಸ್ಮರಣೆ ಸ್ಥಿರವಾಗಿ ಮತ್ತು ಮೌನೀಕರಣವು ತೀವ್ರವಾದಾಗ , ಆಲೋಚನೆಗಳು ಸ್ವಾಭಾವಿಕವಾಗಿ ಕಡಿಮೆಯಾಗುತ್ತವೆ, ಭಾವನೆಗಳು ಶಕ್ತಿ ಕಳೆದುಕೊಳ್ಳುತ್ತವೆ, ಆಂತರಿಕ ಪ್ರತಿಕ್ರಿಯೆಗಳು ನಿಧಾನವಾಗುತ್ತವೆ ಮತ್ತು ಮಾನಸಿಕ ಗೊಂದಲ ಕಡಿಮೆಯಾಗುತ್ತದೆ. ಇದು ನಿಗ್ರಹ ಅಥವಾ ನಿಯಂತ್ರಣವಲ್ಲ; ಇದು ಮಾನಸಿಕ ಚಟುವಟಿಕೆಯು ತಾನಾಗಿಯೇ ನಿಲ್ಲುವಿಕೆ.
ಮಾನಸಿಕ ವಿಷಯಗಳು ಕಣ್ಮರೆ
ಅಭ್ಯಾಸವು ಪ್ರಾಮಾಣಿಕ ಮತ್ತು ನಿರಂತರವಾಗಿದ್ದರೆ, ಮನಸ್ಸಿನಲ್ಲಿ ಸಂಗ್ರಹವಾದ ಎಲ್ಲವೂ ನಾಶಗೊಳ್ಳಲು ಪ್ರಾರಂಭವಾಗುತ್ತದೆ: ನಂಬಿಕೆಗಳು, ಗುರುತುಗಳು, ಭಾವನಾತ್ಮಕ ಮಾದರಿಗಳು, ಇಷ್ಟ ಮತ್ತು ಕಷ್ಟಗಳು, ಮತ್ತು "ನಾನು ಅಭ್ಯಾಸ ಮಾಡುತ್ತಿದ್ದೇನೆ" ಎಂಬ ಪ್ರಜ್ಞೆಯೂ ಸಹ ಇಲ್ಲವಾಗುವುದು. ಯಾವುದನ್ನೂ ಆಯ್ದು ತೆಗೆದು ಹಾಕಲಾಗುವುದಿಲ್ಲ, ಎಲ್ಲವೂ ಹೋಗುತ್ತದೆ. ಎಲ್ಲಾ ವಿಷಯಗಳು ಕಣ್ಮರೆಯಾದಾಗ, ಉಳಿದಿರುವುದು ಶೂನ್ಯ. ಈ ಸ್ಥಿತಿಯನ್ನು ಮನೋನಾಶ ಎಂದು ಕರೆಯಲಾಗುತ್ತದೆ.