Sunday, August 31, 2025

Mounachandrike- Aug 2025

ಲೇಖನ -1

ನಾನು ಯಾರು? – ಆತ್ಮ ಅನ್ವೇಷಣೆಯ ಪ್ರಯಾಣ

“ನಾನು ಯಾರು?” — ಈ ಪ್ರಶ್ನೆ ಆಧ್ಯಾತ್ಮಿಕ ಮಾರ್ಗದಲ್ಲಿ ಕುತೂಹಲ ಉದಯವಾದಾಗ ಹೆಚ್ಚಾಗಿ ಮೂಡುವುದು. ಇದು ಆತ್ಮ ಅನ್ವೇಷಣೆಯ ಪ್ರಯಾಣದ ಮೂಲಭೂತ ಆರಂಭ. ಬಹುತೇಕ ಎಲ್ಲ ಸಂತರು ಈ ಪ್ರಶ್ನೆಯನ್ನು ಕೇಳಿದ್ದಾರೆ. ಇದು ಸರಳವಾಗಿ ಕಾಣಿಸಿದರೂ ಎಲ್ಲರೂ ಇದನ್ನು ಕೇಳುವುದಿಲ್ಲ. ಭೌತಿಕ ಜಗತ್ತಿನಲ್ಲಿ ಏನೋ ಕೊರತೆಯಿದೆ ಎಂಬ ಅನುಭವ ಹೊಂದಿ, ಜೀವನದಲ್ಲಿ ಆಳವಾದ ಅರ್ಥವನ್ನು ಹುಡುಕಲು ಬಯಸುವವನೇ ಈ ಪ್ರಶ್ನೆಯನ್ನು ಕೇಳುತ್ತಾನೆ.

ಹಾಗಾದರೆ ನಿಜವಾಗಿ “ನಾನು” ಯಾರು?
“ನಾನು” ಎಂದರೆ ಹುಟ್ಟಿದಾಗ ಇಟ್ಟ ಹೆಸರು ಅಲ್ಲ, ನಾವು ಗುರುತಿಸಿಕೊಳ್ಳುವ ವೃತ್ತಿಯೂ ಅಲ್ಲ. ತಾಯಿ, ತಂದೆ, ಸ್ನೇಹಿತ, ಉದ್ಯೋಗಿ, ನಾಗರಿಕ ಇತ್ಯಾದಿ ಪಾತ್ರಗಳೂ ಅಲ್ಲ. ಇವೆಲ್ಲವೂ ಜೀವನದ ವಿವಿಧ ಹಂತಗಳಲ್ಲಿ ನಾವು ಧರಿಸುವ ಪಾತ್ರಗಳು ಮಾತ್ರ. ಅವು ಕಾಲಕಾಲಕ್ಕೆ ಬದಲಾಗುತ್ತವೆ. ಆದರೆ ನಿಜವಾದ “ನಾನು” ಬದಲಾಗದ ಅಸ್ತಿತ್ವ. ಅದು ಶೂನ್ಯಾಕಾಶದಿಂದ ಸೃಷ್ಟಿಯಾದ ಅತಿ ಸೂಕ್ಷ್ಮ ಅಂಶ; ಮೂಲತಃ ವಿಶಾಲ ಶೂನ್ಯತೆಯ ಒಂದು ಭಾಗ.

ಚಿವಾಲಿಟಿ ಪದ್ಧತಿಯ ಅಭ್ಯಾಸವು ಒಂದೇ ಪರಮ ಗುರಿಯ ಮೇಲೆ ಕೇಂದ್ರೀಕೃತವಾಗಿದೆ — ನಮ್ಮ ನಿಜವಾದ ಸ್ವರೂಪವನ್ನು ಅರಿತು ಮುಕ್ತಿಯನ್ನು ಪಡೆಯುವುದು. ಈ ಅನುಭವಕ್ಕೆ ತಲುಪಲು, ಮನಸ್ಸಿನಲ್ಲಿರುವ ನಕಾರಾತ್ಮಕ ಗುಣಗಳೆಂಬ ಮುಸುಕನ್ನು ತೆಗೆದುಹಾಕಬೇಕು. ಕೋಪ, ಭಯ, ಅಸೂಯೆ, ಅಹಂಕಾರ ಇತ್ಯಾದಿಗಳು ನಿಜವಾದ “ನಾನು”ನ ಗುಣಗಳಲ್ಲ; ಅವು ನಮಗೂ ಇತರರಿಗೂ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ.

ಆತ್ಮ ಅನ್ವೇಷಣೆಯ ಮಾರ್ಗವು ನಮ್ಮನ್ನು ವಿಶಾಲ ಸಾಗರದಲ್ಲಿನ ಮರಳಿನ ಕಣದಂತೆ ಮಾಡುತ್ತದೆ. ಮರಳಿನ ಕಣವು ಮೌನವಾಗಿರುತ್ತದೆ; ಅದು ಯಾವುದೇ ಅಶಾಂತಿಯನ್ನು ಸೃಷ್ಟಿಸುವುದಿಲ್ಲ. ಅದಕ್ಕಾಗಿಯೇ ಮೌನೀಕರಣದ ಅಭ್ಯಾಸ ಅತ್ಯಂತ ಶಕ್ತಿಯುತವಾಗಿದೆ. ಮೌನದ ಮೂಲಕ ನಾವು ಮನಸ್ಸಿನ ಚಂಚಲತೆ ಮತ್ತು ಗೊಂದಲಗಳನ್ನು ಕರಗಿಸಿ, ಆಂತರಿಕ ಮೌನದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತೇವೆ.

ಈ ಸ್ಥಿತಿಗೆ ತಲುಪಲು, ನಮ್ಮನ್ನು ಕೆಳಗೆ ಎಳೆಯುವ ಎಲ್ಲ ನಕಾರಾತ್ಮಕ ಗುಣಗಳಿಂದ ಮುಕ್ತರಾಗಬೇಕು. ಭೌತಿಕ ಜಗತ್ತಿನಲ್ಲಿ ನಾವು ನಿರ್ವಹಿಸುವ ಪಾತ್ರಗಳು ಸಮಾಜದ ಕಾರ್ಯನಿರ್ವಹಣೆಗೆ ಅಗತ್ಯವಾದರೂ, ಜ್ಞಾನಿಯೊಬ್ಬನು “ನಾನು ಈ ಪಾತ್ರಗಳಲ್ಲ” ಎಂದು ಸ್ಪಷ್ಟವಾಗಿ ಅರಿತಿರುತ್ತಾನೆ. ಅವುಗಳನ್ನು ಗಂಭೀರವಾಗಿ ಹಿಡಿದುಕೊಳ್ಳುವ ಅಗತ್ಯವಿಲ್ಲ. ಇದನ್ನು ನಿಜವಾಗಿ ಅರಿತವರು ಒಳಗಿನ ಗೊಂದಲವಿಲ್ಲದೆ ಇರುತ್ತಾರೆ ಮತ್ತು ಸುಲಭವಾಗಿ ಪ್ರತಿಕ್ರಿಯಿಸುವುದಿಲ್ಲ.

ನಮ್ಮನ್ನು ಮನುಷ್ಯರನ್ನಾಗಿಸುವುದು ಮನಸ್ಸೇ ಆಗಿದ್ದರೂ, ಅದೇ ಮನಸ್ಸು ನಮ್ಮ ನಿಜವಾದ ಸ್ವರೂಪವನ್ನು ಅರಿಯುವಲ್ಲಿ ದೊಡ್ಡ ಅಡ್ಡಿಯಾಗಿದೆ. ಮೌನದ ಮೂಲಕ ಅದನ್ನು ಸಂಪೂರ್ಣವಾಗಿ ಖಾಲಿ ಮಾಡುವುದು ಕಲಿಯಬೇಕು. ಈ ಶಕ್ತಿ ಎಲ್ಲಾ ನಕಾರಾತ್ಮಕತೆಯನ್ನು ಕರಗಿಸುತ್ತದೆ. ಮನಸ್ಸನ್ನು ಈರುಳ್ಳಿಗೆ ಹೋಲಿಸಬಹುದು — ಅದರಂತೆ ಮನಸ್ಸಿಗೂ ಹಲವಾರು ಪದರಗಳಿವೆ: ಬಂಧನಗಳು, ಗುರುತುಗಳು, ಹಳೆಯ ಮುದ್ರಣಗಳು. ಎಲ್ಲ ಪದರಗಳನ್ನು ತೆಗೆದಾಗ ಏನೂ ಉಳಿಯದ ಸ್ಥಿತಿ ಬರುತ್ತದೆ. ಅದೇ ನಮ್ಮ ನಿಜವಾದ ಸ್ವರೂಪ. ಈ ಸ್ಥಿತಿಯನ್ನು ಪಡೆದಾಗ ಎಲ್ಲಾ ಮಿತಿಗಳು ಮತ್ತು ದುಃಖಗಳಿಂದ ಮುಕ್ತರಾಗುತ್ತೇವೆ.

ನಕಾರಾತ್ಮಕತೆಯನ್ನು ತ್ಯಜಿಸಿ ಹೆಚ್ಚು ಸಕಾರಾತ್ಮಕವಾಗಲು ಆರಂಭಿಸಿದಾಗ, ನಾವು ಮುಕ್ತಿಯ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬ ಸ್ಪಷ್ಟ ಸಂಕೇತ ಅದು. ಈ ಮಾರ್ಗದಲ್ಲಿ ದಿನನಿತ್ಯದ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುವುದು ಎಂಬುದು ದೊಡ್ಡ ಸವಾಲು. ಜವಾಬ್ದಾರಿಗಳೇ ಸಮಸ್ಯೆಯಲ್ಲ; “ನಾನು ಸಾಕಷ್ಟು ಮಾಡಲಿಲ್ಲ” ಎಂಬ ಚಿಂತೆಯೇ ನಿಜವಾದ ಸಮಸ್ಯೆ. ಈ ಚಿಂತೆ ಮನಸ್ಸಿನ ಮೇಲೆ ಭಾರವನ್ನು ಸೃಷ್ಟಿಸಿ, ಆಳವಾದ ಮುದ್ರಣಗಳನ್ನು ಉಂಟುಮಾಡುತ್ತದೆ ಮತ್ತು ಅಂತಿಮವಾಗಿ ಕರ್ಮಫಲವಾಗುತ್ತದೆ.

ಆದ್ದರಿಂದ ಮುಖ್ಯವಾದುದು — ಫಲಿತಾಂಶದ ಆತಂಕವಿಲ್ಲದೆ ಜವಾಬ್ದಾರಿಗಳನ್ನು ನಿರ್ವಹಿಸುವುದು. ನಿಷ್ಠೆ ಮತ್ತು ಸಮರ್ಪಣೆಯೊಂದಿಗೆ ಸಾಧ್ಯವಾದುದನ್ನು ಮಾಡಿ, ಫಲವನ್ನು ಬಿಟ್ಟುಬಿಡಿ. ಇದು ಅಸಡ್ಡೆ ಅಲ್ಲ; ಚಿಂತೆಯ ಬದಲು ಆಂತರಿಕ ಶಾಂತಿಯಿಂದ ಕಾರ್ಯನಿರ್ವಹಿಸುವ ವಿಧಾನ.

ಇಂದು ನೀವು ನಿಮ್ಮ ವಿವಿಧ ಪಾತ್ರಗಳೊಂದಿಗೆ ಬಲವಾಗಿ ಗುರುತಿಸಿಕೊಂಡು, ಅವುಗಳಿಂದ ಹೆಮ್ಮೆ ಅಥವಾ ನೋವನ್ನು ಅನುಭವಿಸಬಹುದು. ಆದರೆ ಆಳವಾದ ಸತ್ಯವೆಂದರೆ — ನೀವು ಆ ಪಾತ್ರಗಳಲ್ಲ. ಇದನ್ನು ನಿಜವಾಗಿ ಅರಿತಾಗ, ಯಾವುದೇ ಪಾತ್ರವನ್ನು ಮಾನಸಿಕ ದುಃಖವಿಲ್ಲದೆ ನಿರ್ವಹಿಸಬಹುದು. ನೀವು ಅನುಭವಿಸುವ ನೋವು, ಒತ್ತಡ ಮತ್ತು ಹೋರಾಟ ನಿಮ್ಮ ಮೂಲ ಸ್ವರೂಪದಲ್ಲಿಲ್ಲ; ಏಕೆಂದರೆ ನೀವು ಅವೆಲ್ಲಕ್ಕಿಂತ ಮೇಲಿದ್ದೀರಿ. “ಶೂನ್ಯ” ಸ್ಥಿತಿಯಲ್ಲಿ ಇರುವವನು ಯಾವುದೇ ನೋವನ್ನು ಸ್ವೀಕರಿಸುವ ಅಗತ್ಯವಿಲ್ಲ.

ಹೀಗಾಗಿ, ನಿಮ್ಮ ನಿಜವಾದ ಸ್ವರೂಪವನ್ನು ಕಂಡುಕೊಳ್ಳುವ ಪ್ರಯಾಣವು ಜೀವನದಿಂದ ಪಲಾಯನವಲ್ಲ; ಬದಲಾಗಿ ಜೀವನದೊಂದಿಗೆ ಹೆಚ್ಚು ಜಾಗೃತವಾಗಿ ತೊಡಗಿಸಿಕೊಳ್ಳುವಿಕೆ. ಬಂಧನರಹಿತವಾಗಿ ಜವಾಬ್ದಾರಿಗಳನ್ನು ನಿರ್ವಹಿಸಿ, ಚಿಂತೆಯ ಭಾರದಿಂದ ಮುಕ್ತರಾದಾಗ, ಹೊಸ ಮುದ್ರಣಗಳ ಸೃಷ್ಟಿ ನಿಲ್ಲುತ್ತದೆ. ಮೌನ, ಆತ್ಮವಿಚಾರಣೆ ಮತ್ತು ನಕಾರಾತ್ಮಕತೆಯ ತ್ಯಾಗದ ಮೂಲಕ ನಾವು ಕ್ರಮೇಣ ನಮ್ಮ ಮೂಲಸ್ಥಿತಿಗೆ ಮರಳುತ್ತೇವೆ — ಶುದ್ಧತೆ, ಶಾಂತಿ ಮತ್ತು ಸ್ವಾತಂತ್ರ್ಯ.

ನಿಜವಾದ ವಿಮೋಚನೆ ಅಥವಾ ಮುಕ್ತಿ ದೂರದಲ್ಲಿರುವುದಲ್ಲ. ನಾವು ಬದಲಾಯಿಸುವ ಪಾತ್ರಗಳಲ್ಲ, ಆದರೆ ಅವುಗಳ ಹಿಂದೆ ಇರುವ ಬದಲಾಗದ ಸ್ಥಿತಿಯನ್ನು ಅರಿತುಕೊಳ್ಳುವುದೇ ನಿಜವಾದ ಫಲ. ಆ ಅರಿವಿನಲ್ಲಿ ಎಲ್ಲಾ ದುಃಖಗಳು ಅಂತ್ಯಗೊಳ್ಳುತ್ತವೆ; ಉಳಿಯುವುದು ನಿಶ್ಚಲತೆ, ಸ್ಪಷ್ಟತೆ ಮತ್ತು ಅಚಲವಾದ ಆಂತರಿಕ ಆನಂದ.

“ನಾನು ಯಾರು?” ಎಂಬ ಪ್ರಶ್ನೆಯ ಉದ್ದೇಶ ಉತ್ತರವನ್ನು ಪಡೆಯುವುದು ಅಲ್ಲ; ಪ್ರಶ್ನಿಸುವವನ ಗುರುತು ಕರಗಿಹೋಗುವುದೇ ಅದರ ಸಾರ್ಥಕತೆ.


ಲೇಖನ -2

ದುಃಖದ ಚಕ್ರದಿಂದ ಮುಕ್ತಿ

ನಾವು ಎಷ್ಟೇ ಪ್ರಯತ್ನಿಸಿದರೂ ದುಃಖ ಏಕೆ ನಮ್ಮ ಜೀವನದಲ್ಲಿ ಹಿಂಬಾಲಿಸುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೇವಾ? ಇದರ ಉತ್ತರ ಕರ್ಮಫಲವನ್ನು ಅರ್ಥಮಾಡಿಕೊಳ್ಳುವುದರಲ್ಲಿದೆ. ಕರ್ಮಫಲ ಅಂದರೆ ನಮ್ಮ ಕ್ರಿಯೆಗಳ ಫಲಗಳು. ಅವು ನಮ್ಮ ಮನಸ್ಸಿನಲ್ಲಿ ಮುದ್ರಣಗಳಾಗಿ ಉಳಿಯುತ್ತವೆ.

ಕರ್ಮ ಫಲ ಅಂದರೆ ಏನು? ನಾವು ಯಾವುದೇ ಕರ್ಮ ಮಾಡಿದಾಗ ಮನಸ್ಸು ಅದರ ಫಲದ ಬಗ್ಗೆ ಚಿಂತೆ ಮಾಡುತ್ತಲೇ ಇರುತ್ತದೆ. ಯಶಸ್ಸಿನ ಆಸೆ ಇಲ್ಲವೇ ವಿಫಲತೆಯ ಭಯವನ್ನು ಉಂಟು ಮಾಡುತ್ತದೆ. ಹಿಂದೆ ಮಾಡಿದ ಕೆಲಸಗಳಿಗೆ ಮನಸ್ಸು ದುಃಖಿಸುತ್ತದೆ. ಈ ರೀತಿಯ ಮನಸ್ಸನ್ನು ಯಾವಾಗಲೂ ಭಾರವಾಗಿ ಇರಿಸುವ ಆಲೋಚನೆಗಳೇ ಕರ್ಮ ಫಲಗಳು.

ಈ ಕರ್ಮಫಲವು ಮೂರು ವಿಧವಾಗಿರುತ್ತವೆ. ಇದು ಯಾವಾಗ ಉಂಟಾಯಿತು ಎಂಬುದರ ಮೇಲೆ ಅವಲಂಬಿತವಾಗಿದೆ.

ಸಂಚಿತ: ಹಿಂದಿನ ಜನ್ಮಗಳಲ್ಲಿ ಸೃಷ್ಟಿಯಾದ ಕರ್ಮಫಲ. ಇದೇ ಈ ಜನ್ಮಕ್ಕೆ ಮುಖ್ಯ ಕಾರಣ.

ಪ್ರಾರಬ್ಧ: ಈ ಜನ್ಮದಲ್ಲಿ ಅತಿಯಾದ ಆಲೋಚನೆ ಮತ್ತು ಚಿಂತೆಯಿಂದ ಸೃಷ್ಟಿಯಾಗುವ ಕರ್ಮಫಲಗಳು.

ಆಗಾಮಿ: ಈ ಜನ್ಮದಲ್ಲಿ ಅನುಭವಿಸಿದ ನಂತರ ಉಳಿದುಕೊಳ್ಳುವ ಕರ್ಮಫಲಗಳು. ಇದು ಮುಂದಿನ ಜನ್ಮಕ್ಕೆ ಸೇರುತ್ತದೆ. ಇದು ಸಂಚಿತ ಮತ್ತು ಪ್ರಾರಬ್ಧ ಎರಡರ ಮಿಶ್ರಣವಾಗಿರುತ್ತದೆ.

ನಮ್ಮ ಈ ಜೀವನದ ಗುರಿ - ಸಂಚಿತ ಕರ್ಮಫಲವನ್ನು ಸ್ವೀಕರಿಸುವುದಲ್ಲದೆ ಸಹನೆಯಿಂದ ಅನುಭವಿಸಿ, ಸಂಪೂರ್ಣವಾಗಿ ಖಾಲಿ ಮಾಡಬೇಕಾಗುತ್ತದೆ. ಈ ಜೀವನದಲ್ಲಿ ಮಾಡುವ ಕೆಲಸಗಳಿಂದ ಮಾನಸಿಕವಾಗಿ ದೂರವಿದ್ದು ಪ್ರಾರಬ್ಧ ಕರ್ಮಫಲ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು.

ಚಿವಾಲಿಟಿ ಪದ್ಧತಿಯು ಮೌನದ ಮೂಲಕ ಕರ್ಮಫಲವನ್ನು ಕಡಿಮೆ ಮಾಡುವುದರ ಮೇಲೆ ಗಮನ ನೀಡುತ್ತದೆ. ಕರ್ಮಫಲ ಕರಗಿದಂತೆ ಮಾನಸಿಕ ಕಳವಳಗಳು ಮಾಯವಾಗಿ ಗಾಢವಾದ, ಶಾಶ್ವತ ಶಾಂತಿ ಬರುತ್ತದೆ. ಸಂತೋಷ ಮತ್ತು ದುಃಖ ಎರಡಕ್ಕೂ ಕರ್ಮಫಲವೇ ಮೂಲ ಕಾರಣ. ಕರ್ಮಫಲದಿಂದ ಮುಕ್ತಿ ಸಿಕ್ಕಾಗ ಹೊಗಳಿಕೆ, ನಿಂದನೆ, ಲಾಭ, ನಷ್ಟ ಏನು ಬಂದರೂ ವ್ಯಕ್ತಿ ವಿಚಲಿತನಾಗುವುದಿಲ್ಲ. ಕರ್ಮ ಫಲದ ಸಂಗ್ರಹವೇ ನಮ್ಮ ಈ ಜನ್ಮಕ್ಕೆ ಮುಖ್ಯ ಕಾರಣ. ಮುಕ್ತಿ ಪಡೆಯಲು ಕರ್ಮ ಫಲದಿಂದ ಸಂಪೂರ್ಣವಾಗಿ ಬಿಡುಗಡೆಯಾಗಬೇಕು.

ಕರ್ಮಫಲ ಹೇಗೆ ಸೃಷ್ಟಿಯಾಗುತ್ತದೆ?

ನಮಗೆ ಇಷ್ಟವಾಗದ ಕೆಲಸಗಳನ್ನು ಮಾಡುವಾಗ ಅಥವಾ ಬಲವಂತದಿಂದ ಮಾಡುವಾಗ ಮುಖ್ಯವಾಗಿ ಕರ್ಮಫಲ ಉಂಟಾಗುತ್ತದೆ ಅಲ್ಲದೆ ಅಪೂರ್ಣ ಕೆಲಸಗಳಿಗೆ ಪಶ್ಚಾತ್ತಾಪ ಪಟ್ಟು ಯಾವಾಗಲೂ ಅದರ ಬಗ್ಗೆ ಯೋಚಿಸಿಕೊಂಡಿರುವುದರಿಂದಲೂ ಕರ್ಮಫಲ ಸೃಷ್ಟಿಯಾಗುತ್ತದೆ.

ಪರಿಹಾರ ಬಹಳ ಸರಳ: ಏನಾದರೂ ಮಾಡಲು ಇಚ್ಛಿಸಿದರೆ ಪೂರ್ಣ ಗಮನದಿಂದ ಮಾಡಿ. ಮಾಡಲಾಗದಿದ್ದರೆ ಚಿಂತೆ ಮಾಡದೆ ಬಿಡಿ. ಅದೇ ರೀತಿ ಏನಾದರೂ ಮಾಡಲು ಇಷ್ಟವಿಲ್ಲದಿದ್ದರೆ ಯೋಚನೆ ಮಾಡದೆ ಸರಳವಾಗಿ ಬಿಟ್ಟುಬಿಡಿ. ಇದು ಜವಾಬ್ದಾರಿ ಇಲ್ಲದೆ ಇರುವುದಲ್ಲ, ಒತ್ತಡವಿಲ್ಲದೆ ಸ್ಪಷ್ಟತೆಯಿಂದ ವರ್ತಿಸುವುದು ಎಂಬರ್ಥ. 

ಕರ್ಮಫಲ ಕಡಿಮೆಯಾದಂತೆ ನಮ್ಮ ದೃಷ್ಟಿಕೋನ ಸಕಾರಾತ್ಮಕವಾಗಿ ಬದಲಾಗತೊಡಗುತ್ತದೆ. ಪರಿಸ್ಥಿತಿಗಳನ್ನು ವಿಭಿನ್ನವಾಗಿ ನೋಡಲು ಪ್ರಾರಂಭಿಸುತ್ತೇವೆ. ಹೆಚ್ಚು ವಿವೇಕದಿಂದ ಮತ್ತು ಕಡಿಮೆ ಪ್ರತಿಕ್ರಿಯೆಯಿಂದ ಉತ್ತರಿಸುತ್ತೇವೆ. ದೃಷ್ಟಿಕೋನದಲ್ಲಿರುವ ಈ ಸಕಾರಾತ್ಮಕ ಬದಲಾವಣೆ ನಮ್ಮ ಕರ್ಮ ಫಲವನ್ನು ಕಡಿಮೆ ಮಾಡುತ್ತಿದೆ ಎಂಬುದನ್ನು ಖಚಿತಪಡಿಸುತ್ತದೆ.

ಕರ್ಮಫಲ ಸಂಪೂರ್ಣವಾಗಿ ನಾಶವಾದಾಗ ನೋವಿನ ಘಟನೆಗಳ ನೆನಪುಗಳು ಸಹಜವಾಗಿ ಮಾಸುತ್ತಾ ಹೋಗುತ್ತವೆ. ಮರಣದ ಸಮಯದಲ್ಲಿ ಎಲ್ಲಾ ಕರ್ಮಫಲಗಳು ಇಲ್ಲವಾದರೆ ಮುಕ್ತಿ ಲಭಿಸುತ್ತದೆ. ಅದಕ್ಕಾಗಿ ಚಿವಾಲಿಟಿ ಪದ್ಧತಿಯು ಜೀವಂತವಾಗಿಯೇ ಈ ಕರ್ಮಫಲಗಳನ್ನು ಖಾಲಿ ಮಾಡುವುದರ ಮೇಲೆ ಹೆಚ್ಚು ಗಮನ ಕೊಡುತ್ತದೆ. ಜೀವನದಲ್ಲಿ ಕಷ್ಟಗಳು ಯಾವಾಗಲೂ ಇರುತ್ತವೆ. ಕೆಲಸ ಸರಿಯಾಗಿ ಆಗದಿದ್ದಾಗ ಅಥವಾ ಪರಿಸ್ಥಿತಿಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದಾಗ ಸಮಸ್ಯೆಗಳು ಉದ್ಭವಿಸುತ್ತವೆ. ಕಷ್ಟಗಳು ಬರುವುದು ಖಚಿತ, ಆದರೆ ದುಃಖಪಡುವುದು ನಮ್ಮ ಆಯ್ಕೆ. ಕಷ್ಟಗಳು ಬಾಹ್ಯ ಸಂದರ್ಭಗಳಿಂದ ಬರುತ್ತವೆ, ಆದರೆ ದುಃಖವು ನಮ್ಮ ಮನಸ್ಸಿನ ಪ್ರತಿಕ್ರಿಯೆಯಿಂದ ಬರುತ್ತದೆ.

ಮುಖ್ಯ ವಿಷಯ ಏನೆಂದರೆ, ಕಷ್ಟಗಳು ಬಂದಾಗ ಅವುಗಳ ಬಗ್ಗೆ ಅತಿಯಾಗಿ ಯೋಚಿಸಬಾರದು. ಮಾನಸಿಕವಾಗಿ ಹೆಚ್ಚು ಗಮನ ನೀಡದಿದ್ದರೆ ಕರ್ಮಫಲ ಸೃಷ್ಟಿಯಾಗುವುದಿಲ್ಲ. ಬೆಂಕಿಗೆ ಇಂಧನ ಇಲ್ಲದಿದ್ದರೆ ಅದು ಸಹಜವಾಗಿ ಆರಿ ಹೋಗುತ್ತದೆ. ನಿಜವಾದ ಕಷ್ಟದ ಸಮಯದಲ್ಲಿ ಬಾಹ್ಯ ಕಾರಣಗಳನ್ನು ಅಥವಾ ಜನರನ್ನು ದೂಷಿಸುವುದನ್ನು ತಪ್ಪಿಸುವುದು ಒಳ್ಳೆಯದು. ಈ ಸಂಯಮವು ಹೊಸ ಕರ್ಮಫಲ ಸೇರಿಸುವುದಕ್ಕಿಂತ ಅಸ್ತಿತ್ವದಲ್ಲಿರುವ           ಕರ್ಮಫಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆ ಇಂಥದ್ದು ಆಯಿತು ಎಂಬ ಅಂತ್ಯವಿಲ್ಲದ ವಿಶ್ಲೇಷಣೆಯಲ್ಲಿ ಮುಳುಗುವುದಕ್ಕಿಂತ ಸಹನೆಯನ್ನು ಅಭ್ಯಾಸ ಮಾಡಿ. ಆಕಾಶದಲ್ಲಿ ಮೋಡಗಳು ಹಾದು ಹೋಗುವಂತೆ ಕಷ್ಟಗಳು ನಿಮ್ಮ ಜೀವನದಲ್ಲಿ ಹಾದು ಹೋಗಲಿ. ಅದನ್ನು ಗುರುತಿಸಿ, ಆದರೆ ಅದು ನಿಮ್ಮ ಮನಸ್ಸಿನಲ್ಲಿ ಮುದ್ರಣವಾಗದಿರಲಿ.

ಚಿವಂ ಊರ್ಜೆ ನಿಮಗೆ ಲಭ್ಯವಾದಾಗ ದುಃಖ ಕ್ರಮೇಣ ಮಾಯವಾಗುತ್ತದೆ. ಶಿವ ಶಿವ ಎಂದರೆ ದುಃಖವಿಲ್ಲ ಎಂಬ ಮಾತಿನಂತೆ ಚಿವಂನೊಂದಿಗೆ ಸಂಪರ್ಕವಾದಾಗ ಆ ಸ್ಥಿತಿಯಲ್ಲಿ ದುಃಖದ ಅಸ್ತಿತ್ವ ಇರಲು ಸಾಧ್ಯವಿಲ್ಲ.


ಲೇಖನ -3

ಆಂತರಿಕ ಸ್ವಾ ತಂ ತ್ರ್ಯ : ಪ್ರತಿಕ್ರಿಯೆ ಮತ್ತು ಚಿಂತನೆಗೆ ಮೀರಿದ ಮಾರ್ಗ


ನಿಜವಾದ ಜ್ಞಾನಿಯು ಇತರರ ಸ್ವಾತಂತ್ರ್ಯದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಈ ಸಿದ್ಧಾಂತವು ಆಧ್ಯಾತ್ಮಿಕ ಮಾರ್ಗದಲ್ಲಿ ಅತ್ಯಂತ ಮುಖ್ಯವಾದ ಸತ್ಯಗಳಲ್ಲಿ ಒಂದನ್ನು ಬಹಿರಂಗಪಡಿಸುತ್ತದೆ.

ಪ್ರತಿಯೊಬ್ಬರೂ ತಮ್ಮದೇ ಆದ ಪ್ರಯಾಣದಲ್ಲಿದ್ದಾರೆ, ಆ ಆಯ್ಕೆಗಳು ನಮ್ಮ ಮೇಲೆ ನೇರವಾಗಿ ಪರಿಣಾಮ ಬೀರಿದರೂ ಸಹ ತಮ್ಮದೇ ಆಗಿರುವ ಆಯ್ಕೆಗಳನ್ನು ಮಾಡುವ ಸಹಜ ಹಕ್ಕನ್ನು ಹೊಂದಿದ್ದಾರೆ.

ಈ ತಿಳುವಳಿಕೆಯನ್ನು ಅಂಗೀಕರಿಸುವುದು ಯಾವಾಗಲೂ ಸುಲಭವಲ್ಲ. ನಮ್ಮ ಸ್ವಾಭಾವಿಕ ಪ್ರೇರಣೆ ಸಾಮಾನ್ಯವಾಗಿ ಇತರರನ್ನು ಸರಿಪಡಿಸುವುದು, ಫಲಿತಾಂಶಗಳನ್ನು ನಿಯಂತ್ರಿಸುವುದು ಅಥವಾ ನಮ್ಮ ಇಚ್ಛೆಯ ಪ್ರಕಾರ ಸನ್ನಿವೇಶಗಳನ್ನು ರೂಪಿಸುವುದು. ಆದರೆ ನಾವು ಹಿಂದೆ ಸರಿದು ತೀರ್ಪು ಅಥವಾ ಒತ್ತಡ ಇಲ್ಲದೆ ಜೀವನವನ್ನು ತೆರೆಯಲು ಅವಕಾಶ ನೀಡಿದಾಗ ನಿಜವಾದ ಬೆಳವಣಿಗೆ ಆಗುತ್ತದೆ. ನಮ್ಮೊಳಗೆ ಸ್ವಾತಂತ್ರ್ಯವನ್ನು ಅನುಭವಿಸಲು ಪ್ರಾರಂಭಿಸಿದಾಗ, ನಾವು ಇತರರ ಸ್ವಾತಂತ್ರ್ಯವನ್ನು ನಿಜವಾಗಿ ಗೌರವಿಸುತ್ತೇವೆ.

ಆಂತರಿಕ ಸ್ವಾತಂತ್ರ್ಯದ ಅಡಿಪಾಯ-

ಆಂತರಿಕ ಸ್ವಾತಂತ್ರ್ಯಕ್ಕೆ ಒಂದು ಸರಳ ಉದಾಹರಣೆ: ಒಮ್ಮೆ ಒಬ್ಬ ಆಧ್ಯಾತ್ಮಿಕ ಅನ್ವೇಷಕನು ಊರಿನಿಂದ ಊರಿಗೆ ಪ್ರಯಾಣಿಸುತ್ತಿದ್ದನು. ಒಂದು ಮಧ್ಯಾಹ್ನ ಸೂರ್ಯನ ಕೆಳಗೆ ಹಲವು ಗಂಟೆಗಳ ಕಾಲ ನಡೆದ ನಂತರ ಅವನಿಗೆ ತುಂಬಾ ಹಸಿವಾಗಲು ಪ್ರಾರಂಭಿಸಿತು. ಅವನು ಒಂದು ಸಣ್ಣ ಮನೆಯ ಬಳಿಗೆ ಹೋದನು. ಅಲ್ಲಿ ಒಬ್ಬ ವ್ಯಕ್ತಿ ನೆರಳಿನಲ್ಲಿ ಕುಳಿತಿದ್ದನು. ಅವನ ಹತ್ತಿರ ದಯವಿಟ್ಟು ನನಗೆ ಸ್ವಲ್ಪ ಆಹಾರವನ್ನು ನೀಡಬಹುದೇ, ಬೆಳಗ್ಗೆಯಿಂದ ನಾನು ಏನು ತಿನ್ನಲಿಲ್ಲ ಎಂದು ಸೌಮ್ಯವಾಗಿ ಕೇಳಿದನು.

ಆಗ ಆ ವ್ಯಕ್ತಿ ಇವನನ್ನು ಸೂಕ್ಷ್ಮವಾಗಿ ನೋಡಿ "ಇಂದು ಇಲ್ಲ" ಎಂದು ಉತ್ತರಿಸಿದನು. ಅವನು ಮತ್ತೊಂದು ಮಾತಿಲ್ಲದೆ ಹಿಂದೆ ವಾಪಸು ತಿರುಗಿದನು. ಅನ್ವೇಷಕನು ಒಂದು ಕ್ಷಣ ಮೌನವಾಗಿ ನಿಂತನು. ನಂತರ ತನ್ನ ತಲೆಯನ್ನು ಬಾಗಿಸಿ ಯಾವುದೇ ದ್ವೇಷವಿಲ್ಲದೆ ಶಾಂತವಾಗಿ ಸ್ವೀಕರಿಸಿದನು. ತನಗೆ ಕೇಳುವ ಸ್ವಾತಂತ್ರ್ಯವಿದ್ದಂತೆ ಆ ವ್ಯಕ್ತಿಗೆ ಇಲ್ಲ ಎಂದು ಹೇಳುವ ಸ್ವಾತಂತ್ರ್ಯವಿದೆ ಎಂದು ಅರ್ಥಮಾಡಿಕೊಳ್ಳುವ ಅರಿವು ಅವನಲ್ಲಿತ್ತು.

ಇಂತಹ ಕ್ಷಣಗಳಲ್ಲಿಯೇ ನಿಜವಾದ ಅಭ್ಯಾಸ ಪ್ರಾರಂಭವಾಗುತ್ತದೆ. ನಮ್ಮ ಜೀವನದಲ್ಲಿಯೂ ಈ ರೀತಿಯ ಸರಳ ಕ್ಷಣಗಳು ನಾವು ನಿಜವಾಗಿ ಎಷ್ಟು ಬೆಳೆದಿದ್ದೇವೆ ಎಂಬುದನ್ನು ಬಹಿರಂಗಪಡಿಸುತ್ತವೆ. ಇತರರು ಹೇಗೆ ವರ್ತಿಸಬೇಕು ಎಂಬ ನಮ್ಮ ನಿರೀಕ್ಷೆಗಳನ್ನು ಬಿಟ್ಟುಬಿಟ್ಟಾಗ ನಾವು ನಿಜವಾಗಿ ಎಷ್ಟು ಮುಕ್ತರಾಗಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ. ಈ ಅನುಭವಗಳು ನಮ್ಮ ಆಧ್ಯಾತ್ಮಿಕ ಪರಿಪಕ್ವತೆಯ ಪರೀಕ್ಷೆಗಳಾಗಿ ಕಾರ್ಯನಿರ್ವಹಿಸುತ್ತವೆ.

ಸಾಧು : ಪ್ರತಿಕ್ರಿಯೆಗೆ ಮೀರಿ

ಸಾಧು ಒಂದು ಗಮನಾರ್ಹವಾದ ಗುಣವನ್ನು ಹೊಂದಿದ್ದಾರೆ. ಅವರು ಯಾವುದೇ ಸಂದರ್ಭಗಳಲ್ಲೂ ಪ್ರತಿಕ್ರಿಯಿಸುವುದಿಲ್ಲ. ಆಹ್ಲಾದಕರ ಅಥವಾ ಅಹಿತಕರವಾದದ್ದನ್ನು ಎದುರಿಸಿದರೂ ಅವರು ಶಾಂತರಾಗಿ ಮತ್ತು ಸ್ಥಿರವಾಗಿ ಉಳಿಯುತ್ತಾರೆ. ಇದರ ಅರ್ಥ ಅವರು ಅಸಾಧ್ಯರು ಅಥವಾ ಕಾಳಜಿ ಇಲ್ಲದವರು ಎಂದಲ್ಲ. ಬದಲಿಗೆ ಪ್ರತಿಕ್ರಿಯಾತ್ಮಕ ಭಾವನೆಗಳು ಹೆಚ್ಚು ಆಂತರಿಕವಾಗಿ ಗೊಂದಲಗಳನ್ನು ಮಾತ್ರ ಸೃಷ್ಟಿಸುತ್ತವೆ ಎಂದು ಅರ್ಥಮಾಡಿಕೊಂಡು, ಸಂದರ್ಭಗಳನ್ನು ಲೆಕ್ಕಿಸದೆ ಶಾಂತಿಯನ್ನು ಕಾಪಾಡಿಕೊಳ್ಳಲು ಕಲಿತಿದ್ದಾರೆ ಎಂದರ್ಥ.

ಸಾಧು ಬಾಹ್ಯ ಘಟನೆಗಳು ಆಂತರಿಕ ಸ್ಥಿತಿಗಳನ್ನು ನಿರ್ದೇಶಿಸುವ ಅಗತ್ಯವಿಲ್ಲ ಎಂದು ಕಂಡುಕೊಂಡಿದ್ದಾರೆ. ಅವರು ಪ್ರತಿಕ್ರಿಯಿಸುವ ಬದಲು ಪ್ರತಿಸ್ಪಂದಿಸುತ್ತಾರೆ. ಭಾವನಾತ್ಮಕ ಬಲವಂತಕ್ಕಿಂತ ಸ್ಥಿರವಾದ ಅರಿವಿನಿಂದ ಜೀವನದೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಪರಮ ಸಾಧು : ಚಿಂತನೆಗೆ ಮೀರಿ

ಚಿಂತನೆಯನ್ನು ಮೀರಿ ಇರುವ ಪರಮ ಸಾಧು ಎಂದು ಕರೆಯಲ್ಪಡುವ ಇನ್ನೂ ಉನ್ನತವಾದ ಸ್ಥಿತಿ ಅಸ್ತಿತ್ವದಲ್ಲಿದೆ. ಹೆಚ್ಚಿನ ಜನರು ನಿರಂತರ ಮಾನಸಿಕ ಚಟುವಟಿಕೆಯಿಂದ ನಿಯಂತ್ರಿಸಲ್ಪಡುತ್ತಾರೆ — ಭೂತಕಾಲದ ಬಗ್ಗೆ ತುಂಬಾ ಯೋಚಿಸುವುದು, ಭವಿಷ್ಯದ ಬಗ್ಗೆ ಚಿಂತಿಸುವುದು ಮತ್ತು ವರ್ತಮಾನದ ಬಗ್ಗೆ ತೀರ್ಪು ನೀಡುವುದು.

ಪರಮ ಸಾಧು ಈ ಮಾನಸಿಕ ಗೊಂದಲಕ್ಕೆ ಮೀರಿ ಬದುಕುತ್ತಾರೆ. ಇದರ ಅರ್ಥ ಅವರು ಅಗತ್ಯವಿದ್ದಾಗ ಯೋಚಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ ಎಂದಲ್ಲ. ಬದಲಿಗೆ, ಇದರ ಅರ್ಥ ಅಗತ್ಯವಿದ್ದಾಗ ಅವರು ಯೋಚಿಸಲಾರರು ಎಂದಲ್ಲ; ಆದರೆ ಈಗ ಅವರ ಚಿಂತನೆಗಳು ಅವರನ್ನು ಆಳುವುದಿಲ್ಲ. ನಿರಂತರ ಅನಗತ್ಯ ಚಿಂತನೆಯ ಒತ್ತಡದಿಂದ ಮುಕ್ತರಾಗಿ ಯಾವಾಗ ಯೋಚಿಸುವುದು ಮತ್ತು ಯಾವಾಗ ಬಿಡುವುದು ಎಂಬುದನ್ನು ಅವರೇ ಆರಿಸಿಕೊಳ್ಳುತ್ತಾರೆ.

ಆಧ್ಯಾತ್ಮಿಕ ಬೆಳವಣಿಗೆಯ ಪ್ರಗತಿ

  • ಸಾಧಾರಣ ವ್ಯಕ್ತಿ ಎಲ್ಲಕ್ಕೂ ಭಾವನೆಗಳು ಮತ್ತು ಆಲೋಚನೆಗಳೊಂದಿಗೆ ಪ್ರತಿಕ್ರಿಯಿಸುತ್ತಾನೆ. ಬಾಹ್ಯ ಸಂದರ್ಭಗಳಿಗೆ ಸಿಲುಕುತ್ತಾನೆ.
  • ಸಾಧು ಪ್ರತಿಕ್ರಿಯಿಸದಿರಲು ಕಲಿತಿದ್ದಾನೆ, ಸುತ್ತಲೂ ಏನೇ ನಡೆದರೂ ಶಾಂತನಾಗಿ ಉಳಿಯುತ್ತಾನೆ.
  • ಪರಮ ಸಾಧುವು ಚಿಂತನೆಯನ್ನು ಮೀರಿ ಇದ್ದಾನೆ, ಮಾನಸಿಕ ಗದ್ದಲಕ್ಕೆ ಮೀರಿ ಬದುಕುತ್ತಾನೆ.

ದೈನಂದಿನ ಜೀವನಕ್ಕೆ ಬೇಕಾಗಿರುವ ಅರಿವು

ಈ ಬೋಧನೆಗಳು ಕೇವಲ ಸಿದ್ಧಾಂತವಲ್ಲ. ಅವು ಪ್ರತಿದಿನ ಬದುಕಲು ಬೇಕಾಗಿರುವ ಅರಿವು.

ಪರಿವರ್ತನೆಯ ಮಾರ್ಗವು ಪ್ರಾಮಾಣಿಕ ಸ್ವಯಂ ವಿಚಾರಣೆಯೊಂದಿಗೆ ಪ್ರಾರಂಭವಾಗುತ್ತದೆ. ಯಾರಾದರೂ ನಮ್ಮನ್ನು ಅಸಭ್ಯವಾಗಿ ನಡೆಸಿಕೊಂಡಾಗ ನಾವು ಶಾಂತರಾಗಿ ಉಳಿಯಬಹುದೇ? ನಮಗೆ ಬೇಕಾದದ್ದು ಸಿಗದಿದ್ದಾಗ ನಾವು ಅದನ್ನು ಶಾಂತಿಯುತವಾಗಿ ಸ್ವೀಕರಿಸಬಹುದೇ?

ನಮ್ಮ ಮನಸ್ಸು ಚಿಂತೆಯಿಂದ ತುಂಬಿದಾಗ ಎಲ್ಲಾ ಆಲೋಚನೆಗಳನ್ನು ಮೀರಿ ಇರುವ ಮೌನದಿಂದ ಅರಿವನ್ನು ಕಂಡುಕೊಳ್ಳಬಹುದು. ಈ ವಿಧಾನವು ಸಾಮಾನ್ಯ ಜೀವನವನ್ನು ನಿಜವಾದ ಆಧ್ಯಾತ್ಮಿಕ ಅಭ್ಯಾಸವಾಗಿ ಬದಲಾಯಿಸುತ್ತದೆ. ಇದು ನಿರ್ವಹಿಸಬಹುದಾದ ಹಂತಗಳೊಂದಿಗೆ ಪ್ರಾರಂಭವಾಗುತ್ತದೆ — ನಿರೀಕ್ಷೆಗಿಂತ ಹೆಚ್ಚು ಕಾಯಬೇಕಾದಾಗ ದೂರು ನೀಡದಿರುವುದು, ಯಾರಾದರೂ ಅಸಭ್ಯವಾಗಿ ಮಾತನಾಡಿದಾಗ ಪ್ರತಿಕ್ರಿಯಿಸದಿರುವುದು, ಮತ್ತು ಕ್ರಮೇಣ ಬಾಹ್ಯ ಸಂದರ್ಭಗಳನ್ನು ಲೆಕ್ಕಿಸದೆ ಆಂತರಿಕ ಶಾಂತಿಯನ್ನು ಕಂಡುಕೊಳ್ಳಲು ಕಲಿಯುವುದು.

ಮನಸ್ಸಿನ ಪರಿವರ್ತನೆ

ನಮ್ಮ ಭಾವನೆಗಳು ಮತ್ತು ವೇಗದ ಆಲೋಚನೆಗಳು ಇನ್ನೂ ಮುಂದೆ ನಮ್ಮನ್ನು ನಿಯಂತ್ರಿಸದಿದ್ದಾಗ ಬರುವ ಶಾಂತಿ ಮತ್ತು ಸ್ವಾತಂತ್ರ್ಯವನ್ನು ಕಂಡುಕೊಳ್ಳುವುದೇ ನಮ್ಮ ಗುರಿ. ಈ ಪ್ರಯಾಣವು ಆಧ್ಯಾತ್ಮಿಕ ಪರಿವರ್ತನೆಯ ಸಾರವನ್ನು ಪ್ರತಿನಿಧಿಸುತ್ತದೆ. ಜೀವನ ಯಾವುದುದೇ ಪರೀಕ್ಷೆ ಕೊಟ್ಟರೂ ಪರಿಸ್ಥಿತಿಗಳ ದಾಸರಾಗುವುದರಿಂದ ನಮ್ಮ ಒಳಗಿನ ಸ್ಥಿತಿಯ ನಿಯಂತ್ರಕರಾಗುವವರೆಗೆ ವಿಕಸನಗೊಳ್ಳುವುದು.

ನಿಜವಾದ ಸ್ವಾತಂತ್ರ್ಯ ಇತರರನ್ನು ಅಥವಾ ಪರಿಸ್ಥಿತಿಗಳನ್ನು ನಿಯಂತ್ರಿಸುವುದರಲ್ಲಿ ಅಲ್ಲ, ಬದಲಿಗೆ ನಮ್ಮೊಳಗೆ ಇರುವ ಅಚಲವಾದ ಶಾಂತಿಯನ್ನು ಕಂಡುಕೊಳ್ಳುವುದರಲ್ಲಿ ಇದೆ. ಈ ಶಾಂತಿಯನ್ನು ಯಾವ ಬಾಹ್ಯ ಪರಿಸ್ಥಿತಿಯೂ ಮುಟ್ಟಲು ಸಾಧ್ಯವಿಲ್ಲ.

No comments:

Post a Comment

Mouna chandrike February 2026

 ಮಾಸ್ಟರ್ ಫುಲ್ ನೆಸ್: ಸ್ಮರಣೆಯಿಂದ ಜೀವಂತ ಉಪಸ್ಥಿತಿಗೆ ಮಾಸ್ಟರ್ ಫುಲ್ ನೆಸ್ ಎಂದರೆ ಮಾಸ್ಟರ್ ರವರನ್ನು ಒಂದು ಆಲೋಚನೆಯಾಗಿ ಅಥವಾ ಕಲ್ಪನೆಯಾಗಿ ನೆನಪಿಸಿಕೊಳ್ಳುವ ಕ್ರಿಯ...